St. Jude the Apostle

ಸಂತ ಜೂದರನು ಹನ್ನರಡು ಶಿಷ್ಯರಲ್ಲಿ ಒಬ್ಬರಾಗಿ ಹಾಗೂ ಸಂತ ಯಾಗಪ್ಪರ ಸಹೋದರನೆಂದು ಕರೆಯಲಾಗಿದೆ. ಸಂತ ಮಾತ್ಯೂ (13.15) ರಲ್ಲಿ ಜೂದರನು ಯೇಸುವಿನ ಸಹೋದರನೆಂದು ಸಹ ವರ್ಣಿಸಲಾಗಿದೆ. ಸಹೋದರ ಎಂಬ ಪದವು ಅನೇಕ ಅರ್ಥಗಳನ್ನು ಹೊಂದಿದೆ. ಇಲ್ಲಿ ಸಹೋದರ ಎಂದರೇ, ಚಿಕ್ಕಪ್ಪನ ಮಗ. ಹಬ್ಬು ಭಾಷೆಯಲ್ಲಿ ಸಹೋದರ ಎಂದರೇ ರಕ್ತದ ಸಂಭಂದಿಕರು ಎಂದು ಕರೆಯುತ್ತಾರೆ. ಇನ್ನು ಕೆಲವು ಪುಸ್ತಕಗಳಲ್ಲಿ ಜೂದರ ತಾಯಿಯು, ಹಾಗೂ ಯೇಸುವಿನ ತಾಯಿ ಹತ್ತಿರದ ಸಂಭಂದದವರು ಎಂದು ಬರೆಯಲಾಗಿದೆ.

ಸಂತ ಲೂಕ (7.17)ದಲ್ಲಿ ಸಂತ ಜೂದರು ಹನ್ನೇರಡು ಆಪೋಸ್ತಲರಲ್ಲಿ ಒಬ್ಬರಾಗಿದ್ದಾರೆ ಎಂದು ಬರೆಯಲಾಗಿದೆ . ಸಂತ ಯೊವಾ (14.22), ಸಂತ ಮಾತ್ಯೂ, ಸಂತ ಮಾರ್ಕ್ (3.18) ಜೂದರನು ತಂದೆ ಯೇಸು ಎಂದು ಕರೆಯಲಾಗಿದೆ. ಕ್ಯಾಥೋಲಿಕ್ ಬೈಬಲ್ಲಿನ ಜ್ಞಾನೀಗಳು ಜೂದರು ಹಾಗೂ ತಂದೆ ಯೇಸು ಒಂದೇ ಹೆಸರೆಂದು ವಿವರಿಸಲಾಗಿದೆ. ಆದುದರಿಂದಲೇ ಧರ್ಮಸಭೆಯು ಇವರನ್ನು ಸಂತ ಜೂದ ತಂದೆ ಯೇಸು ಎಂದು ಕರೆಯುತ್ತದೆ.

ಸಂತ ಜೂದರ ಭಕ್ತಿ ಹೇಗೆ ಬಂತು ಎಂಬುದು ಯಾರಿಗೂ ತಿಳಿದಿಲ್ಲ .ಸಂತ ಜೂದರ ಕಷ್ಟಗಳ ಅಥವಾ ಆಶಾರಹಿತವಾದ ಎಂಬುದು ತಿಳಿದಿಲ್ಲ.

ಬೈಬಲಿನಲ್ಲಿ ಇಬ್ಬರ ಹೆಸರನ್ನು ಜೂದರು ಎಂದು ಕಾಣುತೇವೆ. ಒಬ್ಬರು ಸಂತ ಜೂದರು, ಎರಡನೆಯವರು ಯೇಸುವನ್ನು ನಿರಾಕರಿಸಿದ ಜೂದಾಸ್ ಇಸ್ ಕಾರಿಯಟ್ ಇವರಿಬ್ಬರಲ್ಲಿ ಯಾರೆಂಬುದು ಅಸ್ತ ವ್ಯಸ್ತವಾಗಿದೆ. ಜೂದಾಸ್ ಇಸ್ ಕಾರಿಯಟ್ ಜೂದರ ಭಕ್ತಿಯನ್ನು ಆನೇಕ ವರ್ಷಗಳಿಂದ ನಿರಾಕರಿಸಿರಬಹುದೆಂದು ಬರೆಯಲಾಗಿದೆ .ಮದ್ಯಯುಗದಲ್ಲಿ ಇವರ ಭಕ್ತಿ ಸ್ವಲ್ಪವಿತ್ತು. ಇಂದು ಇವರ ಭಕ್ತಿ ಹೆಚ್ಚಾಗಿ ಹರಡಿದೆ.

ಸಾಮಾನ್ಯವಾಗಿ ಸಂತ ಜೂದರು ಯೇಸುಬಾಲರ ಶಿಲೆಯನ್ನು ಕೈಯಲ್ಲಿ ಹಿಡಿದಿರುತ್ತಾರೆ. ಈ ವಿಷಯ(ಕಲ್ಪನೆ) ಒಂದು ಖ್ಯತಾವದ ಕಥೆಯಿಂದ ತೆಗೆದುಕೊಳ್ಳಲಾಗಿದೆ .ಈ ಕಥೆಯಲ್ಲಿ ಎಡಸ್ಸನು ಆಬಾಗಾರ್ ರಾಜ ಯೇಸುವಿನಲ್ಲಿ ಒಬ್ಬಕುಷ್ಠರೋಗಿಯನ್ನು ಗುಣಪಡಿಸಲೆಂದು ಕೇಳಿಕೊಳ್ಳುತ್ತಾನೆ. ಇವನು ಒಬ್ಬಕಲೆಗಾರನನ್ನು ಕರೆತಂದು ಯೇಸುವಿನ ಚಿತ್ರವನ್ನು ಬಿಡಿಸಲು ಹೇಳುತ್ತಾನೆ.

ಆಬಾಗಾರ್ ನಿಗೆ ಯೇಸುವಿನಲ್ಲಿ ಅತ್ಯಂತ ವಿಶ್ವಾಸವಿತ್ತು, ಒಮ್ಮೆ ಯೇಸು ಇತನ ಮುಖವನ್ನು ಒಂದು ಬಟ್ಟೆಯಿಂದ ಮುಟ್ಟಿ ಸಂತ ಜೂದರ ಕೈಯಲ್ಲಿ ಆಗಾಬಾರ್ ನಿಗೆ ಕೊಡಲು ಹೇಳುತ್ತಾರೆ. ಅಷ್ಟುಮಾತ್ರವಲ್ಲ ಯೇಸುವಿನ ಚಿತ್ರವನ್ನು ನೋಡಿದ ತಕ್ಷಣ ಈತನ ಕುಷ್ಠರೋಗವು ಮಾಯವಾಗುತ್ತದೆ. ಕೊನೆಗೆ ಈತನು ಮತ್ತು ಇತನೊಂದಿಗಿದ್ದ ಜನರೆಲ್ಲರೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ.

ಸಾಮಾನ್ಯವಾಗಿ ಸಂತ ಜೂದರುನು ತಲೆಸುತ್ತಾ ಜ್ವಾಲೆಗಳಿಂದ ಕೂಡಿದಂತೆ ತೋರಿಸಲಾಗುತ್ತದೆ. ಇದು ಪವಿತ್ರಾತ್ಮರು ಪ್ರಷಿತರ ಮೇಲೆ ಇಳಿದುಬಂದ ದಿನ ಅಂದರೆ ಪೆಂಟಾಕೋಸ್ಟ್ ದಿನವನ್ನು ಸೂಚಿಸುತ್ತದೆ.

ಸಂತ ಜೂದರು ಯೇಸುವಿನ ಮರಣದ ನಂತರ ಮೆಸಪೋಟೊಮಿಯಾ, ಲಿಪಿಯ ಮತ್ತು ಪರ್ಶಿಯಾ ನಾಡುಗಳನ್ನು ಸಂತ ಸೈಮನ್ ನೊಂದಿಗೆ ಸಂಚರಿಸಿ, ಶುಭ ವಾರ್ತೆಯನ್ನು ಸಾರಿದರು. ಇವರು ಆನೇಕರನ್ನು ಕ್ರೈಸ್ತ ದರ್ಮಕ್ಕೆ ಮತಾಂತರ ಗೊಳಿಸಿದರು. ಇದರಿಂದ ಇವರನ್ನು ಪರ್ಶಿಯ ಅಥವಾ ಸಿರಿಯದಲ್ಲಿ ಕೊಳ್ಳಲಾಗಿದೆ ಎಂದು ಬರೆದಿದೆ. ಇವರ ಕೈಯಲ್ಲಿ ಹಿಡಿದಿರುವ ಆಕೃತ್ತಿಯು. ಇವರನ್ನು ನಿಜವಾಗಿಯು ಕೊಂದಿದ್ದರೆ ಎಂಬುದು ಸೂಚಿಸುತ್ತದೆ. ಇವರ ಶರೀರವನ್ನು ರೋಮ್‌ನಗರಕ್ಕೆ ತಂದು , ಸಂತ ಪೀಟರ್ ಬಾಸಿಲಿಕಾದ ಅಡಿಯಲ್ಲಿ ಇಡಲಾಗಿದೆ,

ಸಂತ ಬರ್ನಾಡ್ ಕ್ಲೇರ್ ವಾಕ್ಸ್ (ಫ್ರಾನ್ಸ್)ಮಧ್ಯಯುಗದಲ್ಲಿ ಸಂತ ಜೂದರ ಭಕ್ತರಾಗಿದ್ದರು. ಇದೇರೀತಿ ಸಂತ ಬ್ರಿಜೆಟ್ (ಸ್ವೀಡನ್)ಸಹ ಜೂದರ ಭಕ್ತರಗಿದ್ದರು. ಒಮ್ಮೆ ಇವರ ಕನಸಿನಲ್ಲಿ ಯೇಸು ಸಂತ ಜೂದರಲ್ಲಿ ವಿಶ್ವಾಸ ನಂಬಿಕೆ ಯನ್ನು ಇಡು ಎಂಬುದಾಗಿ ಹೆಳ್ಳುತ್ತಾರೆ. ಇವರಿಗೆ ಜೂದ ತಂದೆಯ ಹೆಸರು ತಂದೆ ಯೇಸು ಎಂದು ಹೇಳಲಾಗಿತ್ತು (ತಂದೆ ಯೇಸು ಎಂದರೆ ಉದಾರ ಮನಸ್ಸುಳ್ಳವರು ಶಕ್ತಿ ಯುಳ್ಳವರು ಹಾಗೂ ಕರುಣೆಯುಳ್ಳವರು ಎಂದರ್ಥ) ಇವರು ದಾರಾಳ ಮನಸ್ಸಿನಿಂದ ಸಹಾಯ ಮಾಡುವವರು, ಕ್ರಿಯೆಯಿಂದ ತೋರಿಸಿದರು.

ಇಂದಿನ ಆಧ್ಯುನಿಕ ಅಭಿವೃಧಿಯ ಸಮಾಜದಲ್ಲಿ ಮಾನವನ ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳಲು ಯತ್ನಿಸುತ್ತಿದ್ದಾನೆ. ಆದರೂ ಇಂದಿನ ವಿಜ್ಞಾನ ಮತ್ತು ಅಭಿವೃಧಿ ಯಾವುದೇ ತೃಪ್ತಿಯನ್ನು ಮತ್ತು ನಂಬಿಕೆಯನ್ನು ಕೊಡುತ್ತಿಲ್ಲ . ಆದ ಕಾರಣ ,ಅನೇಕ ಜನರು, ಒಬ್ಬೊಂಟಿಗರು ಹಾಗೂ ಪಾಲಕನಾಗಿ ಪರಿಗಣಿಸಲಾಗಿದೆ. ಇವರು ಯಾವಾಗಲೂ ಪರರಿಗೆ ಸಹಾಯಮಾಡುವವರಾಗಿದ್ದಾರೆ.

ಲೋಕದ ಧರ್ಮಸಭೆಯು ಪರಲೋಕದ ಧರ್ಮಾಸಭೆಯೊಂದಿಗೆ ಬಂದಾಗಿದೆ ಎಂದು ಕ್ಯಾಥೊಲಿಕ ಧರ್ಮಸಭೆ ವಿಸ್ವಾಸಿಸುತ್ತದ್ದೆ. ಏಕೆಂದರೆ ನಾವೆಲ್ಲರೂ ಕ್ರೈಸ್ತನ ಸಹೋದರ ಸಹೋದರಿಯರು. ಕೆಲವೊಮ್ಮೆ ನಾವು ದೇವರಲ್ಲಿ ಒಬ್ಬರಿಗೊಬ್ಬರು ಪ್ರಾರ್ಥಿಸುವಾಗ ಸಕಲಸಂತರ ಭಕ್ತಿಯು ಒಳ್ಳೆಕಾರ್ಯಗಳಲ್ಲಿ. ಅದರಿಂದ ವ್ಯಾಟಿಕನ್ ಸಮ್ಮೆಳನ 2 ಎಲ್ ಜಿ ನಂ51 ಒಳತಿಗಾಗಿ ಮತ್ತು ಧರ್ಮಸಭೆಯ ಒಳತಿಗಾಗಿ ನಾವು ಸಂತ ಜೀವನವನ್ನು ಅರಿಸಬೇಕೆಂದು ತಿಳಿಸುತ್ತದೆ.

ದೇವರು ನಿಜವಾದ ದಯೆತೋರುವವರು ಹಾಗೂ ಜೀವಕೊಡುವವರಾಗಿದ್ದಾರೆ ಎಂದು ಧರ್ಮಸಭೆ ಬೋದಿಸುತ್ತದೆ .ಅದ್ದರಿಂದ ಸಂತಜೂದರೊಂದಿಗೆ ಸೇರಿ ಪರಮ ತಂದೆಯೊಂದಿಗೆ ಪ್ರಾರ್ಥಿಸಬೇಕು. ಕಾರಣ ಸಂತ ಜೂದರ ಪ್ರಾರ್ಥನೆ ಬಹಳ ಶಕ್ತಿಯತ್ತವಾದುದು, ಎಂದು ಅನೇಕರು ತಮ್ಮ ಜೀವನದಲ್ಲಿ ಅನುಭವಿಸಿದ್ದಾರೆ. ಅಷ್ಟುಮಾತ್ರವಲ್ಲ ದೇವರು ನಮ್ಮ ಪ್ರಾರ್ಥನೆಗಳನ್ನು ಆಲಿಸಿ ನಮಗೆ ಬೇಕಾದವುಗಳನ್ನು ಕರುಣಿಸುವರು.

ಯಾರು ಸಂತ ಜೂದರ ಸಹಾಯವನ್ನು ಬೇಡುತ್ತಾರೆ ಅವರು ಕಷ್ಟಗಳಿಂದ ದೂರವಾಗುವರು, ಅನೇಕ ರೋಗಗಳಿಂದಲೂ ಗುಣಹೊಂದುವರು.ಇವರು. ಬಡತನವನ್ನು ಕಷ್ಟಾನೋವುಗಳನ್ನು ಕುಟುಂಬದ ತೊಂದರೆ ತೊಡಕುಗಳನ್ನು 
ತೊಲಗಿಸುವವರಾಗಿದ್ದಾರೆ. ಆದುದರಿಂದಲೇ ಸಂತ ಜೂದರು ನಮ್ಮೆಲ್ಲರ ಸಹೋದರರು ಎಂದುಕರೆಯುತ್ತಾರೆ. ಅವರನ್ನು ನಂಬಿದವರಿಗೆ, ಕಂಡಿತ ಸುಖವನ್ನು ನೀಡುವರು.